ಬಾಲಸರಸ್ವತಿ 2

ಪ್ರಸಿದ್ಧ ಸಂಸ್ಕøತ ವೈಯಾಕರಣಿ ಹಾಗೂ ಕವಿ. ರಾಘವ ಯಾದವ ಪಾಂಡವೀಯ ಎಂಬ ತ್ರಿಸಂಧಾನ ಕಾವ್ಯದ ಕರ್ತೃ. ಇದರಲ್ಲಿ ರಾಮಾಯಣ, ಭಾಗವತ ಮತ್ತು ಮಹಾಭಾರತ ಕಥೆಗಳನ್ನು ಏಕಕಾಲಕ್ಕೆ ಈ ಕವಿ ಹೇಳಿದ್ದಾನೆ. ಈ ಕಾರಣದಿಂದ ಇದು ಕ್ಲಿಷ್ಟರೂಪದ್ದಾಗಿದೆ. ಈತನ ಕಾಲ ಇನ್ನೂ ನಿಶ್ಚಯವಾಗಿಲ್ಲ. ಈತನೇ ಚಂದ್ರಿಕಾ ಪರಿಣಯ ಎಂಬ ಕಾವ್ಯ ಬರೆದುದಾಗಿ ತಿಳಿದುಬರುತ್ತದೆ. ಇದನ್ನು ಆತ ವೇಂಕಟಾದ್ರಿ ಎಂಬ ರಾಜನಿಗೆ ಅರ್ಪಿಸಿರುವುದಾಗಿ ಹೇಳಿದ್ದಾನೆ. ಕವಿ ದಕ್ಷಿಣದವನೆಂದು ತೋರುತ್ತದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ